Index   ವಚನ - 2    Search  
 
ಅಂತರಂಗದಲ್ಲಿ ಅರಿವ ತೋರಿ, ಬಹಿರಂಗದಲ್ಲಿ ಕುರುಹ ತೋರಿ, ಉಭಯ ತನ್ನ ಹಿತವಹ ನಿಜನಿವಾಸವ ತೋರಿ ರಕ್ಷಿಸುವ ಪರಮಪಾವನಮೂರ್ತಿ ಶ್ರೀಗುರುವನೆಂದು ಕಾಂಬೆನೋ! ಎನ್ನ ಸುತ್ತಿ ಮುತ್ತಿದ ಭವಪಾಶವ ಹರಿದು, ಎನ್ನ ಮುಸುಕಿಹ ಅಜ್ಞಾನ ತಿಮಿರವ ಪರಿಹರಿಸುವ, ಸಂವಿತ್ಸ್ವರೂಪನಾದ ಮಹಾಮಹಿಮ ಶ್ರೀಗುರುವನೆಂದೀಕ್ಷಿಸುವೆನೊ, ಮಹಾಲಿಂಗ ಕಲ್ಲೇಶ್ವರಾ!