ಅರ್ಚನೆಯಾವರಿಸಿತ್ತಯ್ಯಾ,
ಪೂಜನೆ ಪೂರಿತವಾಯಿತ್ತಯ್ಯಾ,
ಅಜಪೆ ಅಕ್ಕಾಡಿತ್ತಯ್ಯಾ, ಸಮತೆ ಪರಿಣಾಮಿಸಿತ್ತಯ್ಯಾ,
ನಿರ್ವಿಕಲ್ಪ ಸಂಧಾನವಾಯಿತ್ತಯ್ಯಾ.
ಮಹಾಲಿಂಗ ಕಲ್ಲೇಶ್ವರಯ್ಯಾ,
ನಿಮ್ಮ ನೆನೆವ ಮನಕ್ಕೆ.
Art
Manuscript
Music
Courtesy:
Transliteration
Arcaneyāvarisittayyā,
pūjane pūritavāyittayyā,
ajape akkāḍittayyā, samate pariṇāmisittayyā,
nirvikalpa sandhānavāyittayyā.
Mahāliṅga kallēśvarayyā,
nim'ma neneva manakke.