ಉಪನಿಷದ್ವಾಕ್ಯವೆನಬಹುದಲ್ಲದೆ,
ಆ ಪರಬ್ರಹ್ಮವೆನಬಾರದು
ಸಮತೆ ಸಮಾಧಾನವೆಂಬುದು
ಯೋಗದಾಗು ನೋಡಾ.
ಸಮತೆ ಸಮಾಧಾನ ನೆಲೆಗೊಳ್ಳದಿರ್ದಡೆ,
ಆ ಯೋಗ ಅಜ್ಞಾನದಾಗು.
ಅಷ್ಟಶಿಲೆ ಸಹಸ್ರ ಋಷಿಯರು
ಸಮತೆ ಸಮಾಧಾನ ನೆಲೆಗೊಳ್ಳದೆ,
ನಾನಾ ಯೋನಿಯಲ್ಲಿ ಬಂದರು.
ಮಹಾಲಿಂಗ ಕಲ್ಲೇಶ್ವರದೇವಾ,
ಸಮತೆ ನೆಲೆಗೊಂಡು,
ಸಮಾಧಾನ ಸಹಜವಾದುದೆ ಮುಕ್ತಿ ಕ್ಷೇತ್ರ.
Art
Manuscript
Music
Courtesy:
Transliteration
Upaniṣadvākyavenabahudallade,
ā parabrahmavenabāradu
samate samādhānavembudu
yōgadāgu nōḍā.
Samate samādhāna nelegoḷḷadirdaḍe,
ā yōga ajñānadāgu.
Aṣṭaśile sahasra r̥ṣiyaru
samate samādhāna nelegoḷḷade,
nānā yōniyalli bandaru.
Mahāliṅga kallēśvaradēvā,
samate nelegoṇḍu,
samādhāna sahajavādude mukti kṣētra.