Index   ವಚನ - 26    Search  
 
ಉರವೆ ಕುರುಕ್ಷೇತ್ರ, ಶಿರವೆ ಶ್ರೀಪರ್ವತ, ಲಲಾಟವೆ ಕೇದಾರ, ಭ್ರೂನಾಸಿಕದ ಮದ್ಯವೆ ವಾರಣಾಸಿ ನೋಡಾ. ಹೃದಯವೇ ಪ್ರಯಾಗ, ಸರ್ವಾಂಗವೆ ಸಕಲತೀರ್ಥಳಾಗಿ, ಮಹಾಲಿಂಗ ಕಲ್ಲೇಶ್ವರನ ಶರಣರ ಸುಳುಹು ಜಗವತ್ಪಾವನ.