ಗುರುಲಿಂಗಜಂಗಮಕ್ಕೆ ಅರ್ಥ ಪ್ರಾಣ ಅಭಿಮಾನವಂ ಕೊಟ್ಟು,
ಅಹಂಕಾರವಳಿದಿಹಂಥ ಪ್ರಮಥಗಣಂಗಳು,
ಇಂದೆನ್ನ ಮನೆಗೆ ಬಂದಾರೆಂದು,
ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ,
ರಂಗವಲಿಯನಿಕ್ಕಿ, ಉಘೇ ಚಾಂಗುಭಲಾ ಎಂದುಗ್ಗಡಿಸುವೆನು,
ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಪುರಾತನರು
ತಮ್ಮೊಕ್ಕುದನಿಕ್ಕಿ ಸಲಹುವರಾಗಿ.
Art
Manuscript
Music
Courtesy:
Transliteration
Guruliṅgajaṅgamakke artha prāṇa abhimānavaṁ koṭṭu,
ahaṅkāravaḷidihantha pramathagaṇaṅgaḷu,
indenna manege bandārendu,
guḍi tōraṇava kaṭṭi, ṣaḍusam'mārjaneya māḍi,
raṅgavaliyanikki, ughē cāṅgubhalā enduggaḍisuvenu,
mahāliṅga kallēśvarā, nim'ma purātanaru
tam'mokkudanikki salahuvarāgi.