ಗುರುವಿದೆ, ಲಿಂಗವಿದೆ, ಜಂಗಮವಿದೆ,
ಪಾದತೀರ್ಥಪ್ರಸಾದವಿದೆ.
ಮತ್ತೆಯೂ ಬಳಲುತ್ತಿದ್ದೇನೆ, ಭಕ್ತಿ ಸಹಜವಳಡದಾಗಿ.
ಇದರ ಸಂದುಸಕೀಲವನರಿಯದೆ ಮತ್ತೆಯೂ ಬಳಲುತ್ತಿದ್ದೇನೆ,
ಮಹಾಲಿಂಗ ಕಲ್ಲೇಶ್ವರಯ್ಯಾ,
ಸಹಜ ಸದ್ಭಾವ ಸತ್ಯಶರಣರ
ಮಹಾನುಭಾವರ ಸಂಗವಲ್ಲಾಗಿ.
Art
Manuscript
Music
Courtesy:
Transliteration
Guruvide, liṅgavide, jaṅgamavide,
pādatīrthaprasādavide.
Matteyū baḷaluttiddēne, bhakti sahajavaḷaḍadāgi.
Idara sandusakīlavanariyade matteyū baḷaluttiddēne,
mahāliṅga kallēśvarayyā,
sahaja sadbhāva satyaśaraṇara
mahānubhāvara saṅgavallāgi.