Index   ವಚನ - 50    Search  
 
ಗುರುವಿದೆ, ಲಿಂಗವಿದೆ, ಜಂಗಮವಿದೆ, ಪಾದತೀರ್ಥಪ್ರಸಾದವಿದೆ. ಮತ್ತೆಯೂ ಬಳಲುತ್ತಿದ್ದೇನೆ, ಭಕ್ತಿ ಸಹಜವಳಡದಾಗಿ. ಇದರ ಸಂದುಸಕೀಲವನರಿಯದೆ ಮತ್ತೆಯೂ ಬಳಲುತ್ತಿದ್ದೇನೆ, ಮಹಾಲಿಂಗ ಕಲ್ಲೇಶ್ವರಯ್ಯಾ, ಸಹಜ ಸದ್ಭಾವ ಸತ್ಯಶರಣರ ಮಹಾನುಭಾವರ ಸಂಗವಲ್ಲಾಗಿ.