Index   ವಚನ - 49    Search  
 
ಗುರುಲಿಂಗಜಂಗಮಕ್ಕೆ ಅರ್ಥ ಪ್ರಾಣ ಅಭಿಮಾನವಂ ಕೊಟ್ಟು, ಅಹಂಕಾರವಳಿದಿಹಂಥ ಪ್ರಮಥಗಣಂಗಳು, ಇಂದೆನ್ನ ಮನೆಗೆ ಬಂದಾರೆಂದು, ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ, ರಂಗವಲಿಯನಿಕ್ಕಿ, ಉಘೇ ಚಾಂಗುಭಲಾ ಎಂದುಗ್ಗಡಿಸುವೆನು, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಪುರಾತನರು ತಮ್ಮೊಕ್ಕುದನಿಕ್ಕಿ ಸಲಹುವರಾಗಿ.