ಘನದ ವೇದಿಸಿದ ಮನ,
ಮನವ ವೇದಿಸಿದ ಇಂದ್ರಿಯಂಗಳು,
ಇಂದ್ರಿಯಂಗಳ ವೇದಿಸಿದ ತನು,
ತನುವ ವೇದಿಸಿದ ಪ್ರಸಾದ,
ಪ್ರಸಾದವ ವೇದಿಸಿದ ಪರಿಣಾಮ,
ಪರಿಣಾಮವ ವೇದಿಸಿದ ತೃಪ್ತಿ,
ತೃಪ್ತಿಯ ವೇದಿಸಿದ ಇಷ್ಟಲಿಂಗ,
ಇಷ್ಟಲಿಂಗವ ವೇದಿಸಿದ ಜ್ಞಾನ,
ಜ್ಞಾನವ ವೇದಿಸಿದ ನಿರ್ಮಲ ಶಿವಕ್ರಿಯೆ,
ನಿರ್ಮಲ ಶಿವಕ್ರಿಯೆ[ಯ] ವೇದಿಸಿದ ಶರಣಂಗೆ
ಇನ್ನು ವೇದ್ಯರುಂಟೆ, ಮಹಾಲಿಂಗ ಕಲ್ಲೇಶ್ವರಾ?
Art
Manuscript
Music
Courtesy:
Transliteration
Ghanada vēdisida mana,
manava vēdisida indriyaṅgaḷu,
indriyaṅgaḷa vēdisida tanu,
tanuva vēdisida prasāda,
prasādava vēdisida pariṇāma,
pariṇāmava vēdisida tr̥pti,
tr̥ptiya vēdisida iṣṭaliṅga,
iṣṭaliṅgava vēdisida jñāna,
jñānava vēdisida nirmala śivakriye,
nirmala śivakriye[ya] vēdisida śaraṇaṅge
innu vēdyaruṇṭe, mahāliṅga kallēśvarā?