ದಾನಿಯಾದಡೇನು ಅವನು
ಬೇಡಿದಲ್ಲದರಿಯಬಾರದು.
ರಣರಂಗ ಧೀರನಾದಡೇನು
ಅಲಗಲಗು ಹಳಚಿದಲ್ಲದರಿಯಬಾರದು.
ಸ್ನೇಹವಾದಡೇನು ಅಗಲಿದಲ್ಲದರಿಯಬಾರದು.
ಹೇಮಜಾತಿಯಾದಡೇನು ಒರೆದಲ್ಲದರಿಯಬಾರದು.
ಮಹಾಲಿಂಗ ಕಲ್ಲೇಶ್ವರನ ಘನವನರಿದೆಹೆನೆಂದಡೆ,
ಸಂಸಾರಸಾಗರವ ದಾಂಟಿದಲ್ಲದರಿಯಬಾರದು.
Art
Manuscript
Music
Courtesy:
Transliteration
Dāniyādaḍēnu avanu
bēḍidalladariyabāradu.
Raṇaraṅga dhīranādaḍēnu
alagalagu haḷacidalladariyabāradu.
Snēhavādaḍēnu agalidalladariyabāradu.
Hēmajātiyādaḍēnu oredalladariyabāradu.
Mahāliṅga kallēśvarana ghanavanaridehenendaḍe,
sansārasāgarava dāṇṭidalladariyabāradu.