Index   ವಚನ - 67    Search  
 
ಪರಸ್ತ್ರೀಯರ ರೂಪ ಕಾಯದ ಕಣ್ಣಿನಲ್ಲಿ ಕಂಡು, ಮನ ಹರಿದು, ತನು ಕರಗಿ ಬೆರಸಿದ ಬಳಿಕ ಸಂಗವಲ್ಲದೇನು ಹೇಳಾ! ಮನ ಬೆರಸಿ, ತನು ತಳಿತು, ಇಂದ್ರಿಯಂಗಳು ತುಳುಕಿದ ಬಳಿಕ, ಸಂಗವಲ್ಲದೇನು ಹೇಳಾ? ಮಹಾಲಿಂಗ ಕಲ್ಲೇಶ್ವರ ಬಲ್ಲ ಸಿದ್ಧರಾಮನ ಪರಿಯ. ಮನದ ಹಾದರಿಗನು ಶಬ್ದ ರುಚಿಕರನು.