Index   ವಚನ - 73    Search  
 
ಬಾರೆ, ಏತಕ್ಕಯ್ಯ? ನಿಮ್ಮ ಬರವ ಹಾರುತ್ತಿರ್ದೆನು. ಸಾರೆ, ಏತಕ್ಕಯ್ಯ? ನಿಮ್ಮ ಸರವ ಹಾರುತ್ತಿರ್ದೆನು. ತೋರೆ, ಏತಕ್ಕಯ್ಯ? ನಿಮ್ಮ ಲಿಂಗರೂಪು, ನಿಜಜ್ಞಾನವ. ಪೂಜೆಗೊಂಬಾಗಲಲ್ಲದೆ ಎನ್ನ ಮನಕ್ಕೆ ಬರಲಾಗದೆ, ಮಹಾಲಿಂಗ ಕಲ್ಲೇಶ್ವರಾ?