Index   ವಚನ - 75    Search  
 
ಬ್ರಾಹ್ಮಣ ಮೊದಲಾಗಿ ಶ್ವಪಚ ಕಡೆಯಾಗಿ, ಎಲ್ಲಿರಿಗೆಯೂ ಜನನವೊಂದೆ. ಆಹಾರ ನಿದ್ರೆ ಭಯ ಮೈಥುನವೊಂದೆ, ಪುಣ್ಯಪಾಪವೊಂದೆ, ಸ್ವರ್ಗವೊಂದೆ. ಬೇರೆಂಬ ಭಂಗಿತರು ನೀವು ಕೇಳಿರೆ! ಅರಿವೇ ಸತ್ಕುಲ, ಮರವೇ ದುಃಕುಲ, ಅರಿವುವಿಡಿದು ಮನಪಕ್ಷ. ಆಗಮವಿಡಿದು ಆಚಾರ, ಆಚಾರವಿಡಿದು ಸಮಯ. ಅರಿದಡೆ ಶರಣ, ಮರೆದಡೆ ಮಾನವ. ವಿಚಾರಿಸಿದಡೆ ಸಚರಾಚರವೆಲ್ಲವೂ ಪಂಚಭೂತಮಯ. ಚಂದಿರಾದಿಗಳೊಳಗೊಂದು ಮನುಷ್ಯಜನ್ಮ. ಸಪ್ತಧಾತು ಸಮಂಪಿಂಡಂ ಸಮಯೋನಿ ಸಮುದ್ಭುವಂ | ಆತ್ಮಾ ಜೀವನಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ || ಎಂದುದಾಗಿ,ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ. ನಿಮ್ಮ ಶರಣರು ಅಜಾತಚರಿತ್ರರಾಗಿ, ಆವ ಜಾತಿಯನೂ ಹೊದ್ದರು.