ಮನಕೆ ತೋರದು ನೆನೆವಡನುವಲ್ಲ,
ಘನಕ್ಕೆ ಘನವನೇನ ಹೇಳುವೆ?
ಆರರಿಂದ ಮೀರಿದುದ, ಬೇರೆ ತೋರಲಿಲ್ಲದುದ,
ದೇವ ದಾನವ ಮಾನವರ ಬಲ್ಲತನದ ಬಗೆಯ ಮೀರಿದುದನೇನ ಹೇಳುವೆ?
ಆದಿ ಮಧ್ಯಾಂತ ಶೂನ್ಯಂ ಚ ವ್ಯೋಮಾವ್ಯೋಮ ವಿವರ್ಜಿತಂ |
ಧ್ಯಾನಜ್ಞಾನ ದಯಾದೂಧ್ರ್ವಂ ಶೂನ್ಯಲಿಂಗಮಿತಿ ಸ್ಮೃತಂ ||
ಇಂತೆಂದುದಾಗಿ, ಅರಿಯಬಾರದು, ಕುರುಹ ತೋರದು,
ತೆರಹಿಲ್ಲದ ಘನಮಹಾಲಿಂಗ ಕಲ್ಲೇಶ್ವರನ ನಿಜ.
Art
Manuscript
Music
Courtesy:
Transliteration
Manake tōradu nenevaḍanuvalla,
ghanakke ghanavanēna hēḷuve?
Ārarinda mīriduda, bēre tōralilladuda,
dēva dānava mānavara ballatanada bageya mīridudanēna hēḷuve?
Ādi madhyānta śūn'yaṁ ca vyōmāvyōma vivarjitaṁ |
dhyānajñāna dayādūdhrvaṁ śūn'yaliṅgamiti smr̥taṁ ||
intendudāgi, ariyabāradu, kuruha tōradu,
terahillada ghanamahāliṅga kallēśvarana nija.