Index   ವಚನ - 80    Search  
 
ಮನಮನವೇಕಾರ್ಥವಾಗದವರಲ್ಲಿ, ತನುಗುಣ ನಾಸ್ತಿಯಾಗದವರಲ್ಲಿ, ಬುದ್ಧಿಗೆ ಬುದ್ಧಿ ಓರಣವಾಗದವರಲ್ಲಿ, ಭಾವಕ್ಕೆ ಭಾವ ತಾರ್ಕಣೆಯಾಗದವರಲ್ಲಿ, ಶೀಲಕ್ಕೆ ಶೀಲ ಸಮಾನವಿಲ್ಲದವರಲ್ಲಿ, ಅವರೊಡನೆ ಕುಳ್ಳಿರಲಾಗದು, ಸಮಗಡಣದಲ್ಲಿ ಮಾತನಾಡಲಾಗದು. `ಸಂಸರ್ಗತೋ ದೋಷಗುಣಾ ಭವಂತಿ' ಎಂದುದಾಗಿ, ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಸದ್ಭಕ್ತಿಯನರಿದವರ ಸಂಗದಿಂದ ನಿಮಗಾನು ದೂರವಾಗಿಪ್ಪೆನಯ್ಯಾ.