ರೂಪ ನಿರೂಪ ವಿಚಾರಿಸುವರು,
ಸಾಕಾರ ನಿರಾಕಾರವ ವ್ಯಾಪಾರಿಸುವರು.
ಅರಿವು ಮರವೆಯ ಕುರು[ಹ] ಹಿಡಿವರು,
ಮನ ಘನವ ಸಂಬಂಧಿಸುವರು.
ಒಂದೆಂದಡೆ ನಾಮಗಳೆರಡಾಗಿವೆ,
ಎರಡೆಂದಡೆ ಮೂರ್ತಿವೊಂದೆ.
ಒಂದೆರಡೆಂಬುದು ತನ್ನಿಂದಾಯಿತ್ತಾಗಿ,
ತಾನೇ ಮಹಾಲಿಂಗ ಕಲ್ಲೇಶ್ವರಾ.
Art
Manuscript
Music
Courtesy:
Transliteration
Rūpa nirūpa vicārisuvaru,
sākāra nirākārava vyāpārisuvaru.
Arivu maraveya kuru[ha] hiḍivaru,
mana ghanava sambandhisuvaru.
Ondendaḍe nāmagaḷeraḍāgive,
eraḍendaḍe mūrtivonde.
Onderaḍembudu tannindāyittāgi,
tānē mahāliṅga kallēśvarā.