ಲಿಂಗಕ್ಕೆ ಹೊರೆ ಹೊರೆಯಲ್ಲದೆ,
ನಿಜಶಿಲೆಯ ದೀಪ್ತಿಯ ತರಂಗಕ್ಕೆ ಹೊರೆಯುಂಟೆ?
ಸಂಸಾರಿಗೆ ಪ್ರಕೃತಿರಾಗದ್ವೇಷವಲ್ಲದೆ,
ಮನ ಮಹದಲ್ಲಿ ನಿಂದ ನಿಜಲಿಂಗಾಂಗಿಗೆ
ಉಭಯದ ಸಂದುಂಟೆ?
ಈ ಗುಣ ಲಿಂಗಾಂಗಿಯ ಸಂಗ,
ಮಹಾಮಹಿಮ ಕಲ್ಲೇಶ್ವರಲಿಂಗವು ತಾನಾದ ಶರಣ.
Art
Manuscript
Music
Courtesy:
Transliteration
Liṅgakke hore horeyallade,
nijaśileya dīptiya taraṅgakke horeyuṇṭe?
Sansārige prakr̥tirāgadvēṣavallade,
mana mahadalli ninda nijaliṅgāṅgige
ubhayada sanduṇṭe?
Ī guṇa liṅgāṅgiya saṅga,
mahāmahima kallēśvaraliṅgavu tānāda śaraṇa.