Index   ವಚನ - 87    Search  
 
ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು. ಜಂಗಮನಿಷ್ಠೆಯಿಲ್ಲದವರೊಡನೆ ಮಾತನಾಡಲಾಗದು. ಪ್ರಸಾದನಿಷ್ಠೆಯಿಲ್ಲದವರ ಸಹಪಙ್ತಿಯಲ್ಲಿ ಕುಳ್ಳಿರಲಾಗದು. ಲಿಂಗಮುಖಕ್ಕೆ ಬಾರದ ರುಚಿ,ಕಿಲ್ಬಿಷ[ನೋಡಾ], ಮುಟ್ಟಲಾಗದು, ಮಹಾಲಿಂಗ ಕಲ್ಲೇಶ್ವರನನೊಲಿಸುವ ಶರಣಂಗೆ.