Index   ವಚನ - 90    Search  
 
ಲಿಂಗರ್ಪಿತವಿಲ್ಲದೆ ಕೊಂಬ ಕರ್ಮಿಗಳು, ನೀವು ಕೇಳರೆ. ಅನರ್ಪಿತವೇನ ಮಾಡದು? ಅನರ್ಪಿತವೆಲ್ಲಿಗೈಯದು? ಶ್ರುತಿ: ಅಸಮಪ್ರ್ಯ ಪದಾರ್ಥಮ ಶಂಭೋಃ ಭುಂಕ್ತೇ ಉದಕಂ ಪಾತಿ ಚ | ಸ್ವಮಾಂಸಮಸ್ಥಿ ಮೂತ್ರಂ ಚ ಭುಂಕ್ತೇ ಖಾದತಿ ಪಾತಿ ಚ | ಎಂದುದಾಗಿ ಇದು ಕಾರಣ ಮಹಾಲಿಂಗ ಕಲ್ಲೇಶ್ವರ ದೇವರಿಗರ್ಪಿಸದೆ ಕೊಂಡಡೆ ನಾಯ ಮಾಂಸ ನಾಯ ಎಲು [ವ] ನಾಯ ಮೂತ್ರವನು ತಿಂದು ಅಗಿದು ಕುಡೆದಂತೆ ಕಾಣಿಕೆ,