Index   ವಚನ - 89    Search  
 
ಲಿಂಗ ಹೋಯಿತ್ತು ಇದ್ದಿತ್ತೆಂಬ ಭಂಗಿತರು ನೀವು ಕೇಳಿರೆ, 'ಲಿಂಗಮಧ್ಯ ಜಗತ್ಸರ್ವಂ' ಎಂಬ ಲಿಂಗವು 'ಅಣೋರಣೀಯಾನ್ ಮಹತೋ ಮಹೀಯಾನ್ 'ಎಂಬ ಲಿಂಗವು ಹೋಗಲಿಕೆ ತೆರಹುಂಟೆ? 'ಅಲಕ್ಷಮದ್ವಯಂ ಶುನ್ಯಂ' ಎಂಬ ಲಿಂಗವು ಇರಲಿಕ್ಕೇನು ಮೂರ್ತಿಯೆ? ಭಾವಭರಿತ ಲಿಂಗವು ಭಾವ ನಿಭಾರ್ವವಾದಡೆ ತಾನೆ ಮಹಾಲಿಂಗ ಕಲ್ಲೇಶ್ವರನ ಬೇರರಸಲುಂಟೆ ಮರುಳೆ?