ಹಗಲು ಹಸಿವಿಂಗೆ ಕುದಿದು, ಇರುಳು ನಿದ್ರೆಗೆ ಸಂದು,
ಎಚ್ಚತ್ತು ಉಳಿದಾದ ಹೊತ್ತಿನಲ್ಲೆಲ್ಲಾ
ಪಂಚೇಂದ್ರಿಯಂಗಳ ವಿಷಯಕ್ಕೆ ಹರಿದು,
ಅಯ್ಯಾ, ನಿಮ್ಮ ನೆನೆಯಲರಿಯದ ಪಾಪಿಯಯ್ಯಾ.
ಅಯ್ಯಾ, ನಿಮ್ಮ ದೆಸೆಯ ನೋಡದ ಕರ್ಮಿಯಯ್ಯಾ.
ಮಹಾಲಿಂಗ ಕಲ್ಲೇಶ್ವರಾ,
ಅಸಗ ನೀರಡಿಸಿ ಸಾವಂತೆ ಎನ್ನ ಭಕ್ತಿ.
Art
Manuscript
Music
Courtesy:
Transliteration
Hagalu hasiviṅge kudidu, iruḷu nidrege sandu,
eccattu uḷidāda hottinallellā
pan̄cēndriyaṅgaḷa viṣayakke haridu,
ayyā, nim'ma neneyalariyada pāpiyayyā.
Ayyā, nim'ma deseya nōḍada karmiyayyā.
Mahāliṅga kallēśvarā,
asaga nīraḍisi sāvante enna bhakti.