Index   ವಚನ - 101    Search  
 
ಹರವಸದಿ ಹಸಿವನರಿಯದಿಪ್ಪ ಪರಮಸುಖವೆನಗೆಂದಿಪ್ಪುದೊ? ಉರವಣೆಯ ಸುಖದ ಸೋಂಕಿನಲ್ಲಿ ಪರಿಣಾಮ ಎಂದಪ್ಪುದೊ? ನಿಮ್ಮ ನೆನಹ ಎನ್ನ ಹಸು ಲಿಂಗೋಗರವಾದಡೆ ನಾ ನಿಮ್ಮ ನೆನೆವುದು ದಿಟವೆಂಬೆ ಕಾಣಾ, ಮಹಾಲಿಂಗ ಕಲ್ಲೇಶ್ವರಾ.