ಹಸಿಯ ಕಪಾಲದಲ್ಲಿ ಉಂಬನೆಂಬರು, ಅದು ಹುಸಿ,
ಭಕ್ತನ ಮುಖದಲ್ಲಿ ಉಂಬನಾಗಿ.
ಅಸ್ಥಿಗಳ ತೊಟ್ಟನೆಂಬರು, ಅದು ಹುಸಿ,
ಭಕ್ತದೇಹಿಕದೇವನಾಗಿ,
ಚರ್ಮವ ಹೊದ್ದನೆಂಬರು, ಅದು ಹುಸಿ, ಆ ಭಕ್ತನಲ್ಲಿ
ಸದಾಸನ್ನಹಿತನಾಗಿಪ್ಪನಾಗಿ.
ಅದೆಂತೆಂದಡೆ-ಬ್ರಹ್ಮಾಂಡ ಪುರಾಣೇ:
ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ಸ್ವೀಕೃತಂ ಮಯಾ |
ರಸಾನ್ಭಕ್ತಸ್ಯ ಜಿಹ್ವಾಗ್ರಾದಶ್ನಾಮಿ ಕಮಲೋದ್ಭವ ||
ಎಂದುದಾಗಿ, ವಾತುಲೇ:
ಯಾವನ್ನಿರ್ವಹತೇ ಯಸ್ತು ಯಾವಜ್ಜೀವಂ ಪ್ರತಿಜ್ಞಯಾ |
ಮನುಷ್ಯಚರ್ಮಣಾ ಬದ್ಧಃ ಸ ರುದ್ರೋ ನಾತ್ರ ಸಂಶಯಃ ||
ಎಂದುದಾಗಿ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಸುಳುಹು ಪರಕಾಯಪ್ರವೇಶವಾಗಿಹುದು.
Art
Manuscript
Music
Courtesy:
Transliteration
Hasiya kapāladalli umbanembaru, adu husi,
bhaktana mukhadalli umbanāgi.
Asthigaḷa toṭṭanembaru, adu husi,
bhaktadēhikadēvanāgi,
carmava hoddanembaru, adu husi, ā bhaktanalli
sadāsannahitanāgippanāgi.
Adentendaḍe-brahmāṇḍa purāṇē:
Naivēdyaṁ puratō n'yastaṁ darśanātsvīkr̥taṁ mayā |
rasānbhaktasya jihvāgrādaśnāmi kamalōdbhava ||
endudāgi, vātulē:
Yāvannirvahatē yastu yāvajjīvaṁ pratijñayā |
manuṣyacarmaṇā bad'dhaḥ sa rudrō nātra sanśayaḥ ||
endudāgi, mahāliṅga kallēśvarā,
nim'ma suḷuhu parakāyapravēśavāgihudu.