Index   ವಚನ - 142    Search  
 
ವನದೊಳಿಪ್ಪ ಕಪಿ ವನವ ನುಂಗಿ, ವನದ ತಿಳಿಗೊಳನನುಂಗಿ, ತಿಳಿಗೊಳದೊಳಗಿಪ್ಪ ಕಮಲವ ನುಂಗಿ, ಕಮಲದ ಪರಿಮಳವ ನುಂಗಿ, ವಾಯುವಿನೇಣಿಯಿಂದ ಆಕಾಶಕ್ಕೆ ಹಾರಿದುದಿದೇನು ಚೋದ್ಯ ಹೇಳಾ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.