Index   ವಚನ - 156    Search  
 
ಆಸೆಬದ್ಧವು ಬಿಡದು ಈ ಮನದ ಸಾಸಿರಬಗೆಯ ಬೋಧೆಯ ಹೇಳ್ದಡೆಳ್ಳಿನಿತು. ಮೇಷನ ದನಿಗೆ ಆಸೆಗೈದ ವ್ಯಾಘ್ರಬಂಧನ ಸೂಸಲನಾಸೆಗೈದು ಮೂಷಕ ಮಡಿಯದೆ? ಆಸೆಮಾಡದಿರು ಪರಧನ ಪರಸ್ತ್ರೀಯರಿಗೆ ರೋಷಧಿಪತಿಯ ಬಾಧೆಯಿದೆಯೆನೆ ನಾಚದೆ. |1| ದಶದಿಕ್ಕು ಆನೆ ಸೇನೆ ಹೊನ್ನು ಭಂಡಾರ ಕೈ- ವಶವಾಗಿ ಇದು ಸಾಲದೆಂಬುದೀ ಆಸೆಯೆಂಬ ಹಸುಗೂಸನೆತ್ತಲು ರೋಷವೆಂಬ ತಾಯಿ ಸುಳಿದು ವಸುಧೆಯ ಜನರ ತಿಂದು ತೇಗಿ ಕಾಡುವ ಮನದ |2| ಆಸೆಯನಳಿದು ನಿರಾಸೆಯಾಗಿಹರೆ ಶರಣ- ರಾ ಶಿಶುವಾಗೆನ್ನನಿರಿಸು ಕಂಡೆಲೆ ಜಗದೀಶ ಗುರು ಪಡುವಿಡಿ ಸಿದ್ಧಮಲ್ಲಿನಾಥ ನಿಮ್ಮ ಭಾಷೆಯನಿತ್ತು ಮನವ ಸೆರೆಯ ಹಿಡಿಯಯ್ಯ ದೇವ. |3|