Index   ವಚನ - 162    Search  
 
ಆಸೆ ಮಾಡದಿರು ಪರರಿಗೆ ಕೇಳು ಮನವೆ ದೋಷರಹಿತಲಿಂಗವಲ್ಲದನ್ಯರಿಗೆ ದಯವೆಂದು. ಜಲವಿಲ್ಲದ ಕೆರೆಗೆ ತುರು ಬಂದು ಹಿಂದಿರುಗುವಂತೆ ಫಲವಿಲ್ಲದ ಮರಕೆ ಗಿಣಿವಿಂಡು ಮುಸುಕಿದಂತೆ ನಳಿನವಿಲ್ಲದ ಕೊಳಕೆರಗಿದಳಿಚರದಂತೆ ಮಲಹರನ ಭಕ್ತಿಜ್ಞಾನವೈರಾಗ್ಯವಿಲ್ಲದವರಿಗೆ | 1 | ಕಾಮಧೇನಲ್ಲದೆ ಸಾದಾಧರೆಯ ಗೋವುಗಳು [ಪಂ ಚಾಮೃತವನೀಯಬಲ್ಲುದೆ? ಕಲ್ಪವೃಕ್ಷವಲ್ಲದೆ ಬೇವು ಸ್ವಾ ದು ಫಲವನೀವುದೇ? xxx]ಪಡುವುದೆ ಕಾಮಾರಿಲಿಂಗವಲ್ಲದನ್ಯರಿಗೆ ದಯವೆಂದು | 2 | ಕರಸೆರೆಯಲ್ಲಿ ಹಣ್ಣಿರೆ ಮರನೇರಿ ಕೊಯ್ಯುವರುಂಟೇ ? ಪರುಷ ಮನೆಯೊಳಿರೆ ಪರರ ಹಣವ ಬೇಡಲುಂಟೇ ? ಪರಬ್ರಹ್ಮ ಮೂಲವೃಕ್ಷ ಶರೀರದೊಳಿರೆ ಲೋಕ ನರರನಾಸೆಗೈವೆನೆಂಬ ಭ್ರಾಂತಿಯಾಕೆ ಮನುಜ ? | 3 | ದಧಿಯ ಮಥನವ ಮಾಡೆ ಪಂಚಾಮೃತವ ಕುಡುವುದು ಉದಕವ ಕಡೆಯಲೇನ ಕೊಡುವುದಾ ತೆರದಲ್ಲಿ ಸುಧಾಕರ ರತ್ನಲಿಂಗ ನಿನ್ನಿದಿರಿನಲ್ಲಿರುತಿರೆ ಅಧಮರಾದನ್ಯರಿಗೆ ಆಸೆಗೈಯಲಿಬೇಡ. | 4 | ಸರ್ವರ ಮನಧರ್ಮವನರಿವ ಪರಮಾತ್ಮ ನಿನ್ನ ಕರದೊಳಿರೆ ಅನ್ಯಸಂಗವ ಮಾಣಿಸಿ ಗುರು ಪಡುವಿಡಿ ಸಿದ್ಧಮಲ್ಲಿನಾಥನೊಳು ಬೆರೆದು ನಿಶ್ಚಿಂತನಾಗಿರು ಕಂಡ್ಯ ಮನವೆ. | 5 |