Index   ವಚನ - 164    Search  
 
ಇನ್ನೇವೆ ಇನ್ನೇವೆನಯ್ಯಾ? ಸಂಸಾರಕೂಪದ ನೆಲೆಯಿಲ್ಲದ ಜಲದೊಳು ಎನ್ನ ಕೆಡವಿದೆ. ನೆಲೆಗಾಣದೆ ಹಲವು ದೆಸೆಗೆ ಹಂಬಲಿಸಿ ಮುಳುಮುಳುಗಿ ಏಳುತ್ತಿದ್ದೆನಯ್ಯಾ. `ಸಂಸಾರಕೂಪಜಲಮುಚ್ಯತೇ' ಎಂದುದಾಗಿ ಈ ಸಂಸಾರವೆಂಬ ಬಾವಿಯ ಜಲದೊಳು ಮುಳುಗಿರುವಂಗೆ ದುರಿತಸಂಹರವೆಂಬ ತೊಟ್ಟಿಲಿಂಗೆ, ಕರುಣಾಕೃಪೆಯೆಂಬ ಸೇದೆಯ ಹಗ್ಗವ ಕಟ್ಟಿ ಇಳಿವಿಟ್ಟು ಎನ್ನನೆಳೆತೆಗೆದು ಕಾಯೊ ಕಾಯೊ ನಿಮ್ಮ ಧರ್ಮ ನಿಮ್ಮ ಧರ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.