ನೆಲೆಯನರಿಯದ ಮನುಜರು
ಜಲವ ಹೊಕ್ಕರೆ ಮುಳುಗುವರಲ್ಲದೆ
ನೆಲೆಯಬಲ್ಲವರು ಮುಳುಗುವರೇನಯ್ಯಾ?
ಆ ತೆರದಿ, ನಾ ನೆಲೆಯನರಿಯದೆ
ಸಂಸಾರವೆಂಬ ಸಾಗರ ಹೊಕ್ಕರೆ
ಪ್ರಥಮದಲ್ಲಿ ಜಂಘೆಗೆ ಬಂತು,
ದ್ವಿತೀಯೆಯಲ್ಲಿ ಮಣಿಪಾದಕ್ಕೆ ಬಂತು,
ತೃತೀಯೆಯಲ್ಲಿ ಕಟಿಸ್ಥಾನಕ್ಕೆ ಬಂತು,
ಚತುರ್ಥದಲ್ಲಿ ನಾಭಿತನಕ್ಕೆ ಬಂತು,
ಪಂಚಮದಲ್ಲಿ ಉರಸ್ಥಾನಕ್ಕೆ ಬಂತು,
ಆರನೆಯಲ್ಲಿ ಕಂಠಸ್ಥಾನಕ್ಕೆ ಬಂತು,
ಏಳನೆಯಲ್ಲಿ ಸರ್ವಾಂಗವನೆಲ್ಲ ಮುಳುಗಿ
ಸಲೆ ಸಾಯಲಾರದೆ ಒದ್ದಾಡುತ್ತಿರುವನ ಕಂಡು
ಸುಮ್ಮನಿರದಿರೋ ಭೈತ್ರಾಧಿಪತಿಯೆ,
ನಿನ್ನ ಕರುಣಕೃಪೆಯೆಂಬ ಭೈತ್ರವ ಎನ್ನ ಕಡೆಗೆ ತಂದು
`ಸಂಸಾರಸಾಗರಜಲಂ' ಎಂದುದಾಗಿ,
ಸಂಸಾರಸಾಗರದ ನಟ್ಟನಡುವೆ ಮುಳುಗಿಪ್ಪವನನೆಳೆದು
ತೆಗೆಯೊ ಅಘಹರನೆ ಅಮೃತಕರನೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Neleyanariyada manujaru
jalava hokkare muḷuguvarallade
neleyaballavaru muḷuguvarēnayyā?
Ā teradi, nā neleyanariyade
sansāravemba sāgara hokkare
prathamadalli jaṅghege bantu,
dvitīyeyalli maṇipādakke bantu,
tr̥tīyeyalli kaṭisthānakke bantu,
caturthadalli nābhitanakke bantu,
pan̄camadalli urasthānakke bantu,
āraneyalli kaṇṭhasthānakke bantu,
ēḷaneyalli sarvāṅgavanella muḷugi
sale sāyalārade oddāḍuttiruvana kaṇḍu
sum'maniradirō bhaitrādhipatiye,
ninna karuṇakr̥peyemba bhaitrava enna kaḍege tandu
`Sansārasāgarajalaṁ' endudāgi,
sansārasāgarada naṭṭanaḍuve muḷugippavananeḷedu
tegeyo aghaharane amr̥takarane
paramaguru paḍuviḍi sid'dhamallināthaprabhuve.