Index   ವಚನ - 202    Search  
 
ಹಲವು ತರುಗಿರಿ ತೃಣಕಾಷ್ಠವೆಲ್ಲಕೆಯೂ ಒಂದೇ ಕಿಡಿ ಸಾಲದೇನಯ್ಯಾ! ಹಲವು ಜನನದಲ್ಲಿ ಒದಗಿದ ಪಾಪಂಗಳ ಸುಡುವರೆ ಗುರುಕರುಣವೆಂಬ ಒಂದೇ ಕಿಡಿ ಸಾಲದೇನಯ್ಯಾ? ಸಾಕ್ಷಿ: ಇಂಧನಂ ವಹ್ನಿಸಂಯುಕ್ತಂ ವೃಕ್ಷನಾಮ ನ ವಿದ್ಯತೇ | ಗುರುಸಂಸಾರಸಂಪನ್ನಃ ಸ ರುದ್ರೋ ನಾತ್ರ ಸಂಶಯಃ ||'' ಎಂದುದಾಗಿ, ಅದು ಕಾರಣ, ಎನ್ನ ಭವವ ಕಳೆದು ಲಿಂಗದೇಹಿಯ ಮಾಡಿದ, ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೆಂಬ ಗುರುವ ಮರೆದವರಿಗೆ ಇದೇ ನರಕ.