ಗುರುವೆಂಬೆರಡಕ್ಷರವು ಹರನಾಮವಲ್ಲದೆ
ನರನಾಮವೇನಯ್ಯಾ?
ನರರ ನಾಮವೆನಲಾಗದು.
ಗಿರಿಜೆಗೆ ಪರಮಾತ್ಮ ಹೇಳಿದ ವಾಕ್ಯವ
ಕೇಳಿ ಅರಿಯಾ ಮನುಜ.
ಸಾಕ್ಷಿ:
ಗುಕಾರಂ ಮಮ ರೂಪಂಚ ರುಕಾರಂ ತವ ರೂಪಕಂ |
ಉಭಯೋಃ ಸಂಗಮೋ ದೇವಃ ಗುರುರೂಪೇ ಮಹೇಶ್ವರಿ ||''
ಎಂದುದಾಗಿ,
ಪಾಷಾಣದಮುಖದಲ್ಲಿ ಮರುಜೇವಣಿಗೆ ಉದಯವಾದಂತೆ,
ನರಜನ್ಮಮುಖದಿ ಬಂದು ಎನ್ನ ಸರ್ವಜನ್ಮವ ಕಳೆದು
ಪುನರ್ಜಾತನ ಮಾಡಿದ ಪರಮಗುರು
ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ
ಗುರುವೆ ಎನ್ನ ಪ್ರಾಣ.
Art
Manuscript
Music
Courtesy:
Transliteration
Guruvemberaḍakṣaravu haranāmavallade
naranāmavēnayyā?
Narara nāmavenalāgadu.
Girijege paramātma hēḷida vākyava
kēḷi ariyā manuja.
Sākṣi:
Gukāraṁ mama rūpan̄ca rukāraṁ tava rūpakaṁ |
ubhayōḥ saṅgamō dēvaḥ gururūpē mahēśvari ||''
endudāgi,
pāṣāṇadamukhadalli marujēvaṇige udayavādante,
narajanmamukhadi bandu enna sarvajanmava kaḷedu
punarjātana māḍida paramaguru
paḍuviḍi sid'dhamallināthaprabhuvemba
guruve enna prāṇa.