Index   ವಚನ - 208    Search  
 
ಗುರುಹಸ್ತದಿಂದ ಹುಟ್ಟಿದ ಮೇಲೆ ಶಿವಭಕ್ತನೆಂಬ ನಾಮವಾದೀತಯ್ಯಾ! ಗುರುಹಸ್ತದಿಂದ ಹುಟ್ಟದಿದ್ದರೆ ಶಿವಭಕ್ತನೆಂಬ ನಾಮವೆಲ್ಲಿಯದಯ್ಯಾ? ತಮ್ಮ ಪೂರ್ವಜನ್ಮವನು ಗುರುವಿಂಗೊಪ್ಪಿಸಿ ಪುನರ್ಜಾತರಾಗಿ ಗುರುವಿನ ಕರುಣ ಕೃಪೆಯ ಪಡೆದ ಮೇಲೆ ಅನ್ಯಜೀವಿಯ ಹೊಗಳುವ ನರಕಜೀವಿಯನೆನಗೊಮ್ಮೆ ತೋರದಿರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.