ಬಡವನೆಡವಿ ಧನವ ಕಂಡಂತೆ,
ಭವಪಡುವನ ಕರದೊಳು
ಮೃಡಮೂರ್ತಿಲಿಂಗವ ಕಂಡೆನಲ್ಲ |
ಬಿಡದೆ ಅರಸುವ ಬಳ್ಳಿ ಕಾಲತೊಡರಿ ಬಂದಂತೆ
ಭವಭವಾಂತರದಲರಸಿದರೂ ಕಾಣದ
ಕಾಲಸಂಹರದೊಡೆಯನ ಕಂಡೆನಲ್ಲ ಎನ್ನ ಕರದೊಳು!
ವೇದಾತೀತ ನಿರಂಜನನೆಂಬ
ಲಿಂಗವ ಕಂಡೆನಲ್ಲ ಎನ್ನ ಕರದೊಳು!
ಹರಿಯಜರ ಮಧ್ಯದಲ್ಲಿ ಉರಿವುತಿಹ
ಪರಂಜ್ಯೋತಿಲಿಂಗನ
ಕಂಡೆನಲ್ಲ ಎನ್ನ ಕರದೊಳು!
ಕಂಡು ಕಂಡು ಬಿಡಲಾರದ
ಸುವಸ್ತುವ ಕಂಡೆನಲ್ಲ ಎನ್ನ ಕರದೊಳು.
ಆಹಾ ಎನ್ನ ಪುಣ್ಯವೆ! ಆಹಾ ಎನ್ನ ಭಾಗ್ಯವೆ!
ಆಹಾ ಎನ್ನ ಪ್ರಾಣದ ನಲ್ಲನೆಂಬ ಪರಮಾತ್ಮಲಿಂಗವನಪ್ಪಿ
ಅಗಲದಂತೆ ಮಾಡು ಕಂಡ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Baḍavaneḍavi dhanava kaṇḍante,
bhavapaḍuvana karadoḷu
mr̥ḍamūrtiliṅgava kaṇḍenalla |
biḍade arasuva baḷḷi kālatoḍari bandante
bhavabhavāntaradalarasidarū kāṇada
kālasanharadoḍeyana kaṇḍenalla enna karadoḷu!
Vēdātīta niran̄jananemba
liṅgava kaṇḍenalla enna karadoḷu!
Hariyajara madhyadalli urivutiha
paran̄jyōtiliṅgana
kaṇḍenalla enna karadoḷu!
Kaṇḍu kaṇḍu biḍalārada
suvastuva kaṇḍenalla enna karadoḷu.
Āhā enna puṇyave! Āhā enna bhāgyave!
Āhā enna prāṇada nallanemba paramātmaliṅgavanappi
agaladante māḍu kaṇḍyā
paramaguru paḍuviḍi sid'dhamallināthaprabhuve.