Index   ವಚನ - 247    Search  
 
ಇಷ್ಟಲಿಂಗವ ಮರೆದು ಬರಿಯ ಕಲ್ಲಿಗೆರಗುವ ಭ್ರಷ್ಟಂಗಿನ್ನೆಲ್ಲಿಯ ಶಿವಾಚಾರವಯ್ಯಾ! ಖಡ್ಗವ ಬಿಟ್ಟು ಕೋಲುವಿಡಿದು ಕಾಳಗವ ಮಾಡಿದರೆ ತಲೆ ಹೋಗುವುದನರಿಯಾ ಮನುಜ. ಲಿಂಗವ ಬಿಟ್ಟು ಅನ್ಯಲಿಂಗವ ಪೂಜೆಮಾಡಿದರೆ ನರಕವೆಂಬುದನರಿಯಾ ಪಾಪಿ. ಸಾಕ್ಷಿ: “ಇಷ್ಟಲಿಂಗೇ ಪರೇತ್ ಚ ಭಾವಾದನ್ಯತ್ರ ಗಚ್ಛತಿ | ಸ ಕಿಲ್ಬಿಷಮವಾಪ್ನೋತಿ ಪೂಜಯನ್ ನಿಃಫಲೋ ಭವೇತ್||'' ಎಂಬ ವಚನವನರಿಯದೆ ಮುಂದುಗಾಣದನ್ಯದೈವಕೆರಗುವ ಅಂಧಕರಿಗೆಂದೆಂದು ಭವಹಿಂಗದೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.