Index   ವಚನ - 256    Search  
 
ಸರ್ವದೇವಪಿತ ಶಂಭುವೆಂಬ ನಾಮ ಹರಗೆ ಸಲ್ಲುವುದಲ್ಲದೆ ಹರಿಗೆ ಸಲ್ವುದೆ? ಸಲ್ಲದು. ಅದೇನು ಕಾರಣವೆಂದರೆ: ಸರ್ವದೈವ[ವ] ಹುಟ್ಟಿ[ಸ]ಬಲ್ಲ, ಕೊಲ್ಲಬಲ್ಲ, ಸರ್ವದೈವದಿಂದ ಪೂಜೆ ಪುನಸ್ಕಾರವ ಕೊಳಬಲ್ಲ ಪರಮಾತ್ಮನಿಗೆ ಕುರಿದೈವ ಸರಿಯೆನಬಹುದೆ? ಬಾರದು. ತಾ ಸಾವದೇವರು, ನಿಮ್ಮ ವಿಷ್ಣು ಮತ್ತಾರ ಕಾಯಬಲ್ಲುದು, ಹೇಳಿರೌ? ಹರಿ ಹತ್ತು ಪ್ರಳಯಕ್ಕೆ ಗುರಿಯಾದಲ್ಲಿ ಹರನೆ ಲಿಂಗವಾಗಿ ರಕ್ಷಣ್ಯವ ಮಾಡಿದುದು ಸಟೆಯೆನಿಪ್ಪ ಹರನ ಕಿರಿದು ಮಾಡಿ ಹರಿಯ ಹಿರಿದೆಂದು ನುಡಿವ ಚಾಂಡಾಲಿಯ ಬಾಯಲ್ಲಿ ಕಾದ ಸುಣ್ಣದ ಗಾರೆಯ ಹೊಯ್ಯದೆ ಬಿಡುವನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.