Index   ವಚನ - 287    Search  
 
ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ ಪಾದೋದಕ ಪ್ರಸಾದವೆಂಬವು ಅಷ್ಟಾವರಣವು ಪರಶಿವನಿಂದುದಯವಾದವು. ಪರಶಿವನಿಂದುತ್ಪತ್ಯವಾದ ವಸ್ತುವ ಪರಶಿವನೆಂದು ಕಾಣ್ಬುದಲ್ಲದೆ ಅನ್ಯವೆಂದು ಕಂಡಿರಿಯಾದರೆ ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.