ಎನ್ನ ಭಕ್ತನೆಂಬರಯ್ಯಾ
ಎನ್ನ ಭಕ್ತಸ್ಥಲವ ಬಸವಣ್ಣ ಸೊರೆಗೊಂಡನಾಗಿ,
ಎನ್ನ ಮಾಹೇಶ್ವರನೆಂಬರಯ್ಯಾ
ಎನ್ನ ಮಹೇಶ್ವರಸ್ಥಲವ ಮಡಿವಾಳಯ್ಯ ಸೊರೆಗೊಂಡನಾಗಿ,
ಎನ್ನ ಪ್ರಸಾದಿಯೆಂಬರಯ್ಯಾ,
ಎನ್ನ ಪ್ರಸಾದಿಸ್ಥಲವ ಚೆನ್ನಬಸವಣ್ಣ ಸೊರೆಗೊಂಡನಾಗಿ,
ಎನ್ನ ಪ್ರಾಣಲಿಂಗಿಯೆಂಬರಯ್ಯಾ,
ಎನ್ನ ಪ್ರಾಣಲಿಂಗಿಸ್ಥಲವ ನುಲಿಯ ಚಂದಯ್ಯ ಸೂರೆಗೊಂಡನಾಗಿ,
ಎನ್ನ ಶರಣನೆಂಬರಯ್ಯಾ
ಎನ್ನ ಶರಣಸ್ಥಲವ[ಘಟ್ಟಿ]ವಾಳಯ್ಯ ಸೊರೆಗೊಂಡನಾಗಿ,
ಎನ್ನ ಐಕ್ಯನೆಂಬರಯ್ಯಾ
ಎನ್ನ ಐಕ್ಯಸ್ಥಲವ ಅಜಗಣ್ಣಸೊರೆಗೊಂಡನಾಗಿ.
ಇಂತೆನ್ನಂಗಸ್ಥಲವನೆಲ್ಲವ ನಿಮ್ಮ ಲಿಂಗೈಕ್ಯರು ಸೊರೆಗೊಂಡರಾಗಿ,
ಎನ್ನ ಲಿಂಗೈಕ್ಯನೆಂಬರು
ಗೊಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ
ಬಸವಪ್ರಿಯ ಕೂಡಲಸಂಗಮದೇವಾ.
Art
Manuscript
Music
Courtesy:
Transliteration
Enna bhaktanembarayyā
enna bhaktasthalava basavaṇṇa soregoṇḍanāgi,
enna māhēśvaranembarayyā
enna mahēśvarasthalava maḍivāḷayya soregoṇḍanāgi,
enna prasādiyembarayyā,
enna prasādisthalava cennabasavaṇṇa soregoṇḍanāgi,
enna prāṇaliṅgiyembarayyā,
enna prāṇaliṅgisthalava nuliya candayya sūregoṇḍanāgi,
enna śaraṇanembarayyā
Enna śaraṇasthalava[ghaṭṭi]vāḷayya soregoṇḍanāgi,
enna aikyanembarayyā
enna aikyasthalava ajagaṇṇasoregoṇḍanāgi.
Intennaṅgasthalavanellava nim'ma liṅgaikyaru soregoṇḍarāgi,
enna liṅgaikyanembaru
gohēśvaraliṅgadalli prabhuve sākṣiyāgi
basavapriya kūḍalasaṅgamadēvā.