ಮತ್ತಮಂಗ ಲಿಂಗ ಶಕ್ತಿ ಭಕ್ತಿ ಹಸ್ತ ಮುಖ[ಪದಾರ್ಥ]
ಪ್ರಸಾದಂಗಳಿವಕ್ಕೆ
ವಿವರಮಂ ತರದಿಂದುಸಿರ್ವೆನಂಗಮೆನೆ,
ತ್ವಂ ಪದ ವಾಚ್ಯ ಕಾರಣ ಸೂಕ್ಷ್ಮ ಸ್ಥೂಲಾತ್ಮಕ
ಭಕ್ತ ಮಾಹೇಶ್ವರ ಪ್ರಸಾದ ಪ್ರಾಣಲಿಂಗಿ ಶರಣೈಕ್ಯರ್ಲಿಂಗಮೆನೆ,
ತತ್ವದ ವಾಚ್ಯಮಾದಾಚಾರಲಿಂಗ ಗುರು[ಲಿಂಗ]
ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗಂಗಳ್
ಭಕ್ತಿಯನಲಸಿ ಪದವಾಚ್ಯಮಾದ
ಶ್ರದ್ಧೆ ನಿಷ್ಠೆ ಸಾವಧಾನಮನುಭಾವಮಾನಂದ
ಸಮರಸವಿೂಯುಭಯಂಗೂಡಿ
ಅಂಗ ಲಿಂಗ ಸಮರಸಮಾದುದಯ್ಯಾ,
ಷಡಧ್ವಾತೀತ ಪರಮ ಶಿವಲಿಂಗೇಶ್ವರ,
ಪಟೀರದಳ ಭಾಸ್ಕರ.