Index   ವಚನ - 38    Search  
 
ಮತ್ತೆಯು ಪೃಥ್ವ್ಯಪ್ತೇಜೋ ವಾಯ್ವಾಕಾಶಾತ್ಮಂಗಳೆ ತತ್ವಂ. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬಿವೆ ಅಂಗಂ. ಸುಚಿತ್ತ ಸುಬುದ್ದಿ ನಿರಂಹಕಾರ ಸುಮನ ಸುಜ್ಞಾನ ಸದ್ಭಾವಂಗಳೆ ಹಸ್ತಂ. ಕರ್ಮಸಾದಾಖ್ಯ ಕರ್ತೃಸಾದಾಖ್ಯ ಮೂರ್ತಿಸಾದಾಖ್ಯಾ ಮೂರ್ತಿಸಾದಾಖ್ಯ ಶಿವಸಾದಾಖ್ಯ ಮಹಾಸಾದಾಖ್ಯಂಗಳೆಂಬಿವೆ ಸಾದಾಖ್ಯಂ. ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿಯಾದಿಶಕ್ತಿ ಪರಶಕ್ತಿ ಚಿಚ್ಛಕ್ತಿಗಳೆಂಬಿವೆ ಶಕ್ತಿ. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗಂಗಳೆಂಬಿವೆ ಲಿಂಗ. ನಿವೃತ್ತಿ ಪ್ರತಿಷ್ಠೆ ವಿದ್ಯೆ ಶಾಂತಿ ಶಾಂತ್ಯಾತೀತೆ ಶಾಂತ್ಯಾತೀತೋತ್ತರೆಗಳೆಂಬಿವೆ ಕಲೆ. ಸದ್ಯಾದಿ ಪರ್ಯಾಯಮಾದ ಘ್ರಾಣಂ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯವೆಂಬಿವೆ ಮುಖಂ. ಗಂಧ ರಸ ರೂಪ ಸ್ಪರ್ಶ ತೃಪ್ತಿಗಳೆಂಬಿವೆ ದ್ರವ್ಯಂ. ಶ್ರದ್ಧೆ ನಿಷ್ಠೆ ಸಾವಧಾನಮನುಭಾವಮಾನಂದ ಸಮರಸವೆಂಬಿವೆ ಭಕ್ತಿ. ನಕಾರ ಮಕಾರ ಶಿಕಾರ [ವಾಕಾರ] ಯಕಾರೋಕಾರಂಗಳೆಂಬಿವೆ ಮಂತ್ರ ಮಿಂತೇಕಾದಶ ಸಕೀಲಮಿದೆಲ್ಲಂ ತ್ವದೀಯ ವಿಮರ್ಶನ ಸ್ವರೂಪಮಯ್ಯಾ, ಪರಮ ಶಿವಲಿಂಗ ಪರೋಕ್ಷಜ್ಞಾನತಾಲಿಂಗ.