Index   ವಚನ - 55    Search  
 
ಮತ್ತಂ, ಸಚಿತ್ರ ತಮಂಧಾಕಾರಮಾದ ಪುರುಷತತ್ವದ, ಮಂಡಲತ್ರಯದ ತತ್ತಮಂಧರುಚಿಯಂತರ್ಗತ ಮಾಣಿಕ್ಯವರ್ಣದ, ಹಂಸಾಂಕಿತದೆರಡೆಸಳ ನೀರೇಜದ ಕರ್ಣಿಕೆಯ, ಸೂಕ್ಷ್ಮರಂಧ್ರಗತ ಪ್ರಣವದ ಜ್ಯೋತಿರಾಕೃತಿಯಾದ, ಗುಹ್ಯ ಪ್ರಣವವೆ[ಮ]ಹಾಲಿಂಗಮದು, ನಿನ್ನ ಗೋಪ್ಯ ಸ್ವರೂಪಮಾದುದಯ್ಯಾ, ಪರಮ ಶಿವಲಿಂಗ ಪರಿಪೂರ್ಣ ಷಡಂಗ.