Index   ವಚನ - 67    Search  
 
ಮತ್ತೆಯುಂ, ಕರ್ನಿಕೆಯಂ ಬಳಸಿದಗ್ನಿಮಂಡಲ ಚಂದ್ರಮಂಡಲ ಸೂರ್ಯಮಂಡಲ ಸಂಜ್ಞಿತವಾದ ವೃತ್ತತ್ರಯದಲ್ಲಿ ತರದಿ ವ್ಯಾಪಕಾಕ್ಷರ ಸ್ವರಾಕ್ಷರ ಸ್ಪರ್ಶಾಕ್ಷರಂಗಳೆಂಬೀ ವರ್ಗತ್ರಯಮಂ ಪುದುಗೊಳಿಪುದಾ ತ್ರಿವರ್ಗಪದಕ್ಷರಗಣನೆ ನಾಲ್ವತ್ತೆಂಟಾಯಿತ್ತೆಂದು ನಿರವಿಸಿದೆಯಯ್ಯಾ, ಪ್ರಪಂಚಾತೀತ ಪರಮ ಶಿವಲಿಂಗೇಶ್ವರ.