Index   ವಚನ - 86    Search  
 
ಇನ್ನು ಸೃಷ್ಟಿವರ್ಗನಿರೂಪಣಾನಂತರದಲ್ಲಿ ಸಂಹಾರವರ್ಗಮಂ ಪೇಳ್ವೆನೆಂತೆನೆ- ಕ್ಷಕಾರಾದ್ಯಕಾರಾಂತಮಾದಕ್ಷರಮಾಲಿಕೆಯೆ ಸಂಹಾರವರ್ಗಮೆನಿಕುಂ. ಅದರಲ್ಲಿ ಕ್ಷ ಳ ಹ ಸ ಷ ಶ ವ ಲ ರ ಗಳೆಂಬೀ ಪತ್ತೆ ಸಂಹಾರವರ್ಗದಲ್ಲಿ ಮೊದಲವರ್ಗಮಿದು ಪೃಥ್ವಿ. ಮ ಭ ಬ ಫ ಪ ನ ಧ ದ ಥ ತಂಗಳೆಂಬೀ ಪತ್ತೆ ಸಂಹಾರಿವರ್ಗದೊಳೆರಡನೆಯ ವರ್ಗಮಿದಪ್ಪು. ಣ ಢ ಡ ಠ ಟ ಞ ಝ ಜ ಛ ಚಂಗಳೆಂಬೀ ಪತ್ತೆ ಸಂಹಾರವರ್ಗದಲ್ಲಿ ಮೂರನೆಯ ವರ್ಗಮಿದಗ್ನಿ. ಙ ಘ ಗ ಖ ಕಂಗಳೆಂಬೀವೈದುಂ ಸಂಹಾರವರ್ಗದಲ್ಲಿ ನಾಲ್ಕನೆಯ ವರ್ಗಮಿದು ವಾಯು, ಅಃ ಆಂ ಔ ಓ ಐ ಏ ಌ ೡ ೠ ಋ ಊ ಉ ಈ ಇ ಆ ಅ ಎಂಬೀ ಪದಿನಾರೆ ಸಂಹಾರವರ್ಗದಲ್ಲಿಯೈದನೆಯ ವರ್ಗಮಿದಾಕಾಶ ಮಿವೈದು ವರ್ಗಂಗಳನೊಳಕೊಂಡು ಸಂಹಾರವರ್ಗ ಮಿರ್ಪುದಿದಲ್ಲಿಯೆ ಸಮಸ್ತವಾದ ರುದ್ರಮಂತ್ರಗಳನುದ್ಧರಿಪುದಿದೀಗ ಸಂಹಾರವರ್ಗಂ. ಇಂತು ಸ್ಥಿತಿ ಸಂಹಾರ ತಾಮಸವರ್ಗ ವರ್ಗತ್ರಯಂಗಳಂ ನಿರವಿಸಿದೆಯಯ್ಯಾ, ನಿರಾಳ ನಿಶ್ಚಿಂತ ಪರಮ ಶಿವಲಿಂಗೇಶ್ವರ.