Index   ವಚನ - 110    Search  
 
ಮತ್ತಂ, ಶಕ್ತಿಸಂಜ್ಞಿತವಾದ ಸ್ ಎಂಬ ವ್ಯಂಜನ ಸಕಾರಮಾದಿಕಲೆಯೊಡನೆ ಕೂಡಿ ಸ ಎಂದಾಯ್ತು. ಬಳಿಕ್ಕಂ, ಸೋಮಸಂಜ್ಞಿತವಾದ ಕುಬೇರವರ್ಗದ ಕಡೆಗಳಾದ ವಕಾರ ಶಕಾರದ್ವಯವಂ ದ್ವಿಕಲಸಂಜ್ಞಿಕವಾದಕಾರಮಂ ತ್ರಿಕಲಸಂಜ್ಞಿತವಾದಿಕಾರಮಂ ತರದಿಂ ಕೂಡಿಸೆ ವಾಶಿಯೆಂದಾಯಿತ್ತಾ ವರ್ಣಂಗಳೆರಡರೊಳ್ಪೊರ್ವವಂ ಪರಕ್ಕೆ ಪರವಂ ಪೂರ್ವಕ್ಕೆ ಪ್ರಯೋಗಿಸೆ ಶಿವಾಯೆಂದಾಯ್ತು. ಮರಲ್ದುಂ, ಕುಬೇರವರ್ಗದ ಮೊದಲ ಯ್ ಎಂಬ ವರ್ಣಮನಾದಿ ಕಲೆಯೊಡನೆ ಕೂಡೆ ಯ ಎನಿಸಿತೀ ಪೇಳ್ದ `ಹೌಂ ಸ ಶಿವಾಯ' ಎಂಬೀ ಪಂಚಾಕ್ಷರೀಮಂತ್ರವು ಮುಕ್ತಿದ ಯಂತ್ರವೆಂದು ನಿರವಿಸಿದೆಯಯ್ಯಾ, ಪರಮಶಿವಲಿಂಗೇಶ್ವರ ಪರಿಪೂರ್ಣ ಭಕ್ತಿ ಭಾಸ್ವರ.