ಮರಲ್ದುಮಾ ಪ್ರಣವಂ ಪಂಚಪ್ರಕಾರಮಾದಪುದೆಂತೆನೆ
ಸಾಕಲ್ಯಪ್ರಣವವೆಂದು, ಶಾಂಭವಪ್ರಣವವೆಂದು,
ಸೌಖ್ಯಪ್ರಣವವೆಂದು, ಸಾವಶ್ಯಪ್ರಣವವೆಂದು,
ಸಾಯುಜ್ಯಪ್ರಣವವೆಂದು ಸದಾಶಿವನ ಪಂಚಮುಖಂಗಳಲ್ಲಿ
ಪೊರೆಪೊಣ್ಮಿದವಿವರೊಳ್ಮೊದಲು ಸಾಕಲ್ಯಪ್ರಣವಕ್ಕೆ ವಿವರಂ-
ಅಕಾರಂ ಉಕಾರಂ ಮಕಾರಂ ಎಂದು ತ್ರಿವಿಧಂ.
ಈ ತ್ರಿಮಾತ್ರಾಂತರ್ಗತವಾಗಿರ್ಪುದು ಶುದ್ಧ ಶಿವಶಬ್ದ
ವಾಚ್ಯವಾದದಾಖ್ಯವೆನಿಪ ಹಕಾರಂ.
ಅಕಾರಂ ಉಕಾರಂ ಈ ಎರಡುಂ ಕೂಡಿದುದೆ ಒಕಾರಂ.
ಈ ಮಂತ್ರಮೂರ್ತಿಗೆ ಅಕಾರವೆ ಬಲಂ ಉಕಾರವೆ ಎಡಂ
ಮಕಾರವೆ ಮಧ್ಯದೇಹಂ.
ಈ ಮೂರು ಕೂಡಿ ಓಂ ಎಂದು
ಮೂರ್ತಿಯಾಯಿತ್ತೀ. ತ್ರಿವಿಧಾತ್ಮಕ
ಶರೀರಕ್ಕೆ ಹಕಾರವೆ ಶುದ್ಧ ಚೈತನ್ಯಬ್ರಹ್ಮವೆನಿಸಿತ್ತು.
ಅಕಾರಕ್ಕೆ ಬ್ರಹ್ಮನಧಿದೇವತೆ.
ಉಕಾರಕ್ಕೆ ವಿಷ್ಣುವಧಿದೇವತೆ.
ಮಕಾರಕ್ಕೆ ರುದ್ರನಧಿದೇವತೆ.
ಒಕಾರಕ್ಕ ಸದಾಶಿವನಧಿದೇವತೆ.
ನಾದಾತ್ಮಕಮಾದ ಹಕಾರವೆ ಪರಶಿವಸ್ವರೂಪಂ.
ಈ ತೆರನಾದ ಆ ಉ ಮ ಒ ಹ ಎಂಬೀ
ಪಂಚಾಕ್ಷರಂಗಳ್ಪಂಚ ದೇವತಾಸ್ವರೂಪಂಗಳೀ
ಸಕಲಂಗೂಡಿ ಓಂ ಎಂಬುದೆ ಸಾಕಲ್ಯಪ್ರಣವಂ.
ಇದೊಂದೆ ಬ್ರಹ್ಮಂ.
ಮತ್ತಂ, ಪಂಚಮ ಸಂಜ್ಞಿಕವಾದ ಉಕಾರಂ
ಪ್ರಥಮಸಂಜ್ಞಿಕವಾದ ಅಕಾರಮಂ
ಕೂಡೆ ಒ ಎಂದಾಯಿತ್ತದೆ
ತೃತೀಯಸಂಜ್ಞಿಕಮಕಾರಾಂತರ್ಗತವನುಳ್ಳ ಹಕಾರವೆನಿಸಿತ್ತಿಂತು
ಅ ಉ ಮ ಒ ಎಂಬ ಚತುರಕ್ಷರಂಗೂಡಿದ
ಹ ಎಂಬ ಶಿವಬೀಜವೆ ಸಾಕಲ್ಯಪ್ರಣವವೆನಿಸಿತ್ತೀ
ಸಾಕಲ್ಯಪ್ರಣವವೆ ಸದಾಶಿವನ
ಪೂರ್ವಮುಖದಲ್ಲಿ ಉದ್ಧೃತವಾಯಿತ್ತೀ
ಪ್ರಣವಬ್ರಹ್ಮಕ್ಕೆ ಮತ್ತೊಂದು
ಸಾಕಲ್ಯಾಭಿಧಾನಮನುಂಟು ಮಾಳ್ಪುದೆಂತೆನೆ
ಶಿವತತ್ವಬೀಜಕ್ಕೆ ಸದಾಶಿವತತ್ವ ಭೇದವಾದ
ಮತ್ತೊಂದು ಶುದ್ಧಾಭಿಧಾನವಾದುದೆಂದು
ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
Art
Manuscript
Music
Courtesy:
Transliteration
Maraldumā praṇavaṁ pan̄caprakāramādapudentene
sākalyapraṇavavendu, śāmbhavapraṇavavendu,
saukhyapraṇavavendu, sāvaśyapraṇavavendu,
sāyujyapraṇavavendu sadāśivana pan̄camukhaṅgaḷalli
porepoṇmidavivaroḷmodalu sākalyapraṇavakke vivaraṁ-
akāraṁ ukāraṁ makāraṁ endu trividhaṁ.
Ī trimātrāntargatavāgirpudu śud'dha śivaśabda
vācyavādadākhyavenipa hakāraṁ.
Akāraṁ ukāraṁ ī eraḍuṁ kūḍidude okāraṁ.
Ī mantramūrtige akārave balaṁ ukārave eḍaṁ
makārave madhyadēhaṁ.
Ī mūru kūḍi ōṁ endu
mūrtiyāyittī. Trividhātmaka
śarīrakke hakārave śud'dha caitan'yabrahmavenisittu.
Akārakke brahmanadhidēvate.
Ukārakke viṣṇuvadhidēvate.
Makārakke rudranadhidēvate.
Okārakka sadāśivanadhidēvate.
Nādātmakamāda hakārave paraśivasvarūpaṁ.
Ī teranāda ā u ma o ha embī
pan̄cākṣaraṅgaḷpan̄ca dēvatāsvarūpaṅgaḷī
sakalaṅgūḍi ōṁ embude sākalyapraṇavaṁ.
Idonde brahmaṁ.
Mattaṁ, pan̄cama san̄jñikavāda ukāraṁ
prathamasan̄jñikavāda akāramaṁ
kūḍe o endāyittade
tr̥tīyasan̄jñikamakārāntargatavanuḷḷa hakāravenisittintu
a u ma o emba caturakṣaraṅgūḍida
Ha emba śivabījave sākalyapraṇavavenisittī
sākalyapraṇavave sadāśivana
pūrvamukhadalli ud'dhr̥tavāyittī
praṇavabrahmakke mattondu
sākalyābhidhānamanuṇṭu māḷpudentene
śivatatvabījakke sadāśivatatva bhēdavāda
mattondu śud'dhābhidhānavādudendu
nirūpisideyayyā, parama śivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ