ಮತ್ತಂ, ಸಾಕಲ್ಯಪ್ರಣವ ನಿರೂಪಣಾನಂತರದಲ್ಲಿ
ಪಂಚಮಾತ್ರಾಸಮನ್ವಿತಮಾದ ಶಾಂಭವಪ್ರಣವವಂ ಪೇಳ್ದೆನೀ
ಪಂಚಪ್ರಣವಂಗಳ್ಗೆಯುಂ ಹ ಎಂಬಕ್ಕರಂ ಪ್ರಸಿದ್ಧಂ.
ತದನಂತರದೊಳ್ಸೌಖ್ಯಪ್ರಣವ ಭೇದಮಂ ಪೇಳ್ವೆನೆಂತೆನೆ
ವರ್ಗಾದಿ ಸಂಜ್ಞಿತವಾದ ಅಕಾರಂ
ಪಂಚಮಸ್ವರ ಸಂಜ್ಞಿತವಾದ ಉಕಾರಂ
ಷಷ್ವವರ್ಗಾಂತ ಸಂಜ್ಞಿತವಾದ ಮಕಾರಂ
ಬೀಜ ಸಂಜ್ಞಿತವಾದ ಹಕಾರಂ
ತೃತೀಯ ಸ್ವರ ಸಂಜ್ಞಿತವಾದ ಇಕಾರಂ
ಇಂತು ಅ ಉ ಮ ಹ ಇ ಈ ಐದಕ್ಕರಂಗೂಡಿದ
ಸೌಖ್ಯಪ್ರಣವಂ
ಸದಾಶಿವನ ಪಶ್ಚಿಮವದನದೊಳುಣ್ಮಿದುದು.
ಮತ್ತಂ, ಸಾವಶ್ಯಪ್ರಣವವೆಂತೆನೆ-
ಅಕಾರಂ ಸ್ವರಪಂಚಮಾಂತ ಸಂಜ್ಞಿತವಾದ ಉಕಾರಂ.
ಪವರ್ಗಾಂತರವಾದ ಮಕಾರಂ
ತತ್ವ ಬೀಜ ಸಂಜ್ಞಿತವಾದ ಹಕಾರಂ,
ಏಕಾದಶಕಲಾ ಸಂಜ್ಞಿಕವಾದ ಎಕಾರಂ,
ಇಂತು ಆ ಉ ಮ ಹ ಎ ಯೇಂಬೀಯೈದಕ್ಕರಂಗೂಡಿದ
ಸಾವಶ್ಯಪ್ರಣವಂ,
ಸದಾಶಿವನ ಸೌಮ್ಮಮುಖದೊಳಾವಿರ್ಭಾವವಾಯಿತ್ತು.
ಮತ್ತಂ, ಸಾಯಜ್ಯಪ್ರಣವವೆಂತೆನೆ-
ಆದಿಪ್ರಕೃತಿ ಸಂಜ್ಞಿತಮಾದ ಆಕಾರಂ
ಸ್ವರಪಂಚಮಾಂತಮಾದ ಉಕಾರಂ
ಷಡ್ವರ್ಗಾಂತವಾದ ಮಕಾರಂ
ಗುಹ್ಯ ಸಂಜ್ಞಿಕವಾದ ಹಕಾರಂ
ಚತುರ್ದಶಕಲಾ ಸಂಜ್ಞಿಕವಾದ ಔಕಾರಂ.
ಇಂತು ಆ ಉ ಮ ಹ ಔ ಯೆಂಬೀಯೈದಕ್ಕರಂಗೂಡಿದ
ಸಾಯುಜ್ಯಪ್ರಣವವೆ,
ಸದಾಶಿವನೂರ್ಧ್ವಮುಖದೊಳುದಿಸಿತ್ತೀ
ತೆರದಿಂ ಪಂಚಪ್ರಣವಂಗಳಕ್ಕರಂಗಳ್ಸಂಖ್ಯಾಯುಕ್ತಂಗಳಾಗಿರ್ಕುಮಾ
ಸಕಲಮಾತ್ರಾಂತಸ್ಥಮಾಗಿ ಹ ಎಂಬಕ್ಕರಮಗಣ್ಯಮಾಗಿರ್ಪುದೆಂದು
ಪಂಚಪ್ರಣವಭೇದಮಂ ನಿರೂಪಿಸಿದೆಯಯ್ಯಾ,
ಪರಮ ಶಿವಲಿಂಗಯ್ಯ.
Art
Manuscript
Music
Courtesy:
Transliteration
Mattaṁ, sākalyapraṇava nirūpaṇānantaradalli
pan̄camātrāsamanvitamāda śāmbhavapraṇavavaṁ pēḷdenī
pan̄capraṇavaṅgaḷgeyuṁ ha embakkaraṁ prasid'dhaṁ.
Tadanantaradoḷsaukhyapraṇava bhēdamaṁ pēḷvenentene
vargādi san̄jñitavāda akāraṁ
pan̄camasvara san̄jñitavāda ukāraṁ
ṣaṣvavargānta san̄jñitavāda makāraṁ
bīja san̄jñitavāda hakāraṁ
tr̥tīya svara san̄jñitavāda ikāraṁ
intu a u ma ha i ī aidakkaraṅgūḍida
saukhyapraṇavaṁ
sadāśivana paścimavadanadoḷuṇmidudu.
Mattaṁ, sāvaśyapraṇavaventene-
akāraṁ svarapan̄camānta san̄jñitavāda ukāraṁ.
Pavargāntaravāda makāraṁ
tatva bīja san̄jñitavāda hakāraṁ,
ēkādaśakalā san̄jñikavāda ekāraṁ,
intu ā u ma ha e yēmbīyaidakkaraṅgūḍida
sāvaśyapraṇavaṁ,
sadāśivana saum'mamukhadoḷāvirbhāvavāyittu.
Mattaṁ, sāyajyapraṇavaventene-
ādiprakr̥ti san̄jñitamāda ākāraṁ
svarapan̄camāntamāda ukāraṁ
ṣaḍvargāntavāda makāraṁ
guhya san̄jñikavāda hakāraṁ
caturdaśakalā san̄jñikavāda aukāraṁ.
Intu ā u ma ha au yembīyaidakkaraṅgūḍida
sāyujyapraṇavave,
sadāśivanūrdhvamukhadoḷudisittī
teradiṁ pan̄capraṇavaṅgaḷakkaraṅgaḷsaṅkhyāyuktaṅgaḷāgirkumā
sakalamātrāntasthamāgi ha embakkaramagaṇyamāgirpudendu
pan̄capraṇavabhēdamaṁ nirūpisideyayyā,
parama śivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ