Index   ವಚನ - 132    Search  
 
ಮತ್ತಮಾ, ಸದ್ಯಾದಿಗಳಿಂದೊಗೆದ ಪೃಥ್ವ್ಯದಿ ಪಂಚಭೂತಂಗಳ ವರ್ಣಂಗಳಂ ಪೇಳ್ವೆನೆಂತೆನೆ- ಪೃಥ್ವಿ ಪಳದಿ, ಅಪ್ಪು ಬಿಳ್ಪುವಗ್ನಿ ಕೆಂಪು, ವಾಯು ಕರ್ಪೂವಾಕಾಶ ಪೊಗೆ ಯೀ ತೆರದಿಂ ಪಂಚಭೂತಾಕಾರಂಗಳಾದವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.