Index   ವಚನ - 172    Search  
 
ಮತ್ತಮಾ, ಮಹಾಲಿಂಗದ ಶಿವಷಟ್ಸ್ಥಾನದಲ್ಲಿ- ಯಾಧಾರಾದಿ ಸ್ಥಾನಂಗಳಲ್ಲಿ ಷಡ್ವಿಧ ಚಕ್ರಂಗಳಂ ಪೇಳ್ವೆನೆಂತೆನೆ- ಅ ಶಿವಲಿಂಗದಧಃಪಟ್ಟಿಕೆಯೆ ಆಧಾರಚಕ್ರಮದರ ಚತುಃಕೋಷ್ಠಂಗಳೆ ಚತುರ್ದಳಂಗಳವರಲ್ಲಿ ವ ಶ ಷ ಸ ಎಂಬ ನಾಲ್ಕಕ್ಕರಂ ನ್ಯಸ್ತವಾಗಿರ್ಪುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.