Index   ವಚನ - 180    Search  
 
ಮತ್ತಮಾ ಮಹಾಲಿಂಗದಧಃಕಂಜಾಖ್ಯವಾದನಾಹತಚಕ್ರದ ರುದ್ರಸ್ವರೂಪವೆಂತೆನೆ- ಕ ಕ್ರೋಢೀಶಂ, ಖ ಚಂಡೇಶಂ, ಗ ಪಂಚಾಂತಕಂ, ಘ ಶಿವೋತ್ತಮಂ, ಙ ಏಕರುದ್ರಂ, [ಚ ಕೂರ್ಮರುದ್ರಂ , ಛ ಏಕನೇತ್ರರುದ್ರಂ, ಜ ಚತುರಾನನರುದ್ರಂ, ಝ ಅಜೇಶರುದ್ರಂ, ಞ ಶರ್ವರುದ್ರಂ, ಟ ಸೋಮೇಶರುದ್ರಂ, ಠ ಲಾಂಗುಲಿರುದ್ರಂ. ಇಂತೀ ದ್ವಾದಶರುದ್ರರೀ ಮಹಾಲಿಂಗದನಾಹತಚಕ್ರದ ದ್ವಾದಶಕೋಷ್ಠದಳನ್ಯಸ್ತಕಾದಿರಾಂತ ದ್ವಾದಶ ವಿಕಲಾಕ್ಷರ ವಾಚ್ಯರೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.