Index   ವಚನ - 183    Search  
 
ಮತ್ತೆಯುಮೀ ಮಹಾಲಿಂಗದೂರ್ಧ್ವಪಟ್ಟಿಕಾಸಂಜ್ಞೆಯನುಳ್ಳಾಧಾರಚಕ್ರದ ರುದ್ರಸ್ವರೂಪಮೆಂತೆನೆ- ವ ಬಕಂ, ಶ ಶ್ವೇತಂ, ಷ ಭೃಗ್ವೀಶಂ, ಸ ಲಕುಲಿ, ಳ ಶಿವಂ, ಕ್ಷ ಸಂವರ್ತಕಂ. ಈ ಷಡ್ವಿಧರುದ್ರರೊಳಗೆ ಮೊದಲ ನಾಲ್ವರೆ ಆಧಾರಚಕ್ರದ ಚತುಃಕೋಷ್ಠದಳನ್ಯಸ್ತ ರುದ್ರರು. ಉಳಿದಿರ್ವರೆ ಪೂರ್ವೋಕ್ತ ಮಹಾಲಿಂಗದಾಜ್ಯಪ್ರಧಾರಿಕಾ ದ್ವಿಕೋಷ್ಠದಳನ್ಯಸ್ತ ದ್ವಿರುದ್ರರೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.