Index   ವಚನ - 185    Search  
 
ಮತ್ತಂ ಶಿವಷಟ್ಚಕ್ರನಿರೂಪಣಾನಂತರದಲ್ಲಿ ಶಕ್ತಿ ಷಟ್ಚಕ್ರಗಳೆಂತನೆ- ಪಿಂದಣೈವತ್ತೊಂದು ರುದ್ರವಾಚ್ಯಬೀಜಂಗಳೆ ಶಕ್ತಿ ಬೀಜಂಗಳಿವಕ್ಕೆ ವಿವರಂ. ಆ ಪೂರ್ಣೋದರಿ ಆ ವಿರಜೆ ಇ ಶಾಲ್ಮಲಿ ಈ ಲೋಲಾಕ್ಷಿ ಉ ವರ್ತುಲಾಕ್ಷಿ ಊ ದೀರ್ಘಘೋಣೆ ಋ ದೀರ್ಘಮುಖಿ ೠ ಗೋಮುಖಿ ಌ ದೀರ್ಘಜಿಹ್ವಾ ೡ ಕುಂಡೋದರಿ ಏ ಊರ್ಧ್ವಕೇಶಿ ಐ ವಿಕೃತಮುಖಿ ಓ ಜ್ವಾಲಾಮುಖಿ ಔ ಉಲ್ಕಮುಖಿ ಅಂ ಶ್ರೀಮುಖಿ ಆಃ ವಿದ್ಯಾಮುಖಿ ಇಂತೀ ಮಹಾಲಿಂಗದ ಶಕ್ತಿಯೂರ್ಧ್ವಪಟ್ಟಿಕಾಖ್ಯ ವಿಶುದ್ಧಿಚಕ್ರದ ಷೋಡಶ ಕೋಷ್ಠದಳನ್ಯಸ್ತ ಷೋಡಶ ರುದ್ರಶಕ್ತಿಯರಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.