ಮತ್ತಂ, ಷಡಧ್ವನ್ಯಾಸಮೆಂತೆನೆ-
ಪೃಥ್ವೀಸ್ಥಾನಮಪ್ಪಧಃಪಟ್ಟಿಕಾ ಸಂಜ್ಞಿಕವಾದಾಧಾರಸ್ಥಾನದಲ್ಲಿ
ಭುವನಾಧ್ವಮನುದಕಸ್ಥಾನವಪ್ಪಧಃಕಂಜಸಂಜ್ಞಿಕ ಸ್ವಾಧಿಷ್ಠಾನದಲ್ಲಿ,
ಪದಾಧ್ವಮನಗ್ನಿಸ್ಥಾನವಪ್ಪ ಕಂಠಸಂಜ್ಞಿಕ ಸ್ವಾಧಿಷ್ಠಾನದಲ್ಲಿ
ಪದಾಧ್ವಮನಗ್ನಿಸ್ಥಾನವಪ್ಪ ಕಂಠಸಂಜ್ಞಿಕ ವೃತ್ತವೆನಿಪ ಮಣಿಪೂರಕದಲ್ಲಿ,
ವರ್ಣಾಧ್ವಮನೂರ್ಧ್ವಾಬ್ಜ ಸಂಜ್ಞಿಕವಪ್ಪನಾಹತದಲ್ಲಿ,
ಕಲಾಧ್ವಮನೂರ್ಧ್ವ ಪಟ್ಟಿಕಾಸಂಜ್ಞಿಕವಪ್ಪ ವಿಶುದ್ಧಿಯಲ್ಲಿ
ತತ್ವಾಧ್ವಮನಾಜ್ಯಪ್ರಧಾರಿಕಾಸಂಜ್ಞಿಕವಪ್ಪಾಜ್ಞೇಯದಲ್ಲಿ,
ಮಂತ್ರಾಧ್ವಮಂ ನ್ಯಾಸಂಗೆಯ್ವುದಿಂತು
ಸಪ್ತಕೋಟಿ ಮಹಾಮಂತ್ರಾತ್ಮವಾದೀ ಮಹಾಲಿಂಗಮಂ
ಪೊರಗೊಳಗೊಂದೆಯೆಂದೇಕಭಾವದಲ್ಲಿಯರ್ಚಿಪುದೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
Art
Manuscript
Music
Courtesy:
Transliteration
Mattaṁ, ṣaḍadhvan'yāsamentene-
pr̥thvīsthānamappadhaḥpaṭṭikā san̄jñikavādādhārasthānadalli
bhuvanādhvamanudakasthānavappadhaḥkan̄jasan̄jñika svādhiṣṭhānadalli,
padādhvamanagnisthānavappa kaṇṭhasan̄jñika svādhiṣṭhānadalli
padādhvamanagnisthānavappa kaṇṭhasan̄jñika vr̥ttavenipa maṇipūrakadalli,
varṇādhvamanūrdhvābja san̄jñikavappanāhatadalli,
kalādhvamanūrdhva paṭṭikāsan̄jñikavappa viśud'dhiyalli
Tatvādhvamanājyapradhārikāsan̄jñikavappājñēyadalli,
mantrādhvamaṁ n'yāsaṅgeyvudintu
saptakōṭi mahāmantrātmavādī mahāliṅgamaṁ
poragoḷagondeyendēkabhāvadalliyarcipudendu
niravisideyayyā, paraśivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ